Honorable M.Srinivas,Mandya MLA

ಎಂ. ಶ್ರೀನಿವಾಸ್ ಮಂಡ್ಯ ತಾಲ್ಲೂಕು ಹನಕೆರೆ ಗ್ರಾಮದಲ್ಲಿ 02.02.1951ರಲ್ಲಿ ಜನನ. ತಂದೆ ಮೆಣಸೇಗೌಡ ಹಾಗೂ ತಾಯಿ ಅರಸಮ್ಮ. ರೈತಾಪಿ ಕುಟುಂಬ. ಹನಕೆರೆಯಲ್ಲಿಯೇ ಪ್ರಾಥಮಿಕ ಹಾಗೂ ಮಾಧ್ಯಮಿಕ ವಿದ್ಯಾಭ್ಯಾಸ. ಪ್ರೌಢಶಾಲಾ ಶಿಕ್ಷಣವನ್ನು ಮಂಡ್ಯದ ಸರ್ಕಾರಿ ಪ್ರೌಢಶಾಲೆಯಲ್ಲೂ (ಕಲ್ಲುಕಟ್ಟಡ), ಬಿಎಸ್ಸಿ ಪದವಿಯನ್ನು ಮೈಸೂರಿನ ಎಂಡಿಟಿಡಿಬಿ ಕಾಲೇಜಿನಲ್ಲಿ ಮುಗಿಸಿದ ಶ್ರೀಯುತರು ಕಾನೂನು ಪದವಿಯನ್ನು ಮಂಡ್ಯದ ಹೊಂಬೇಗೌಡ ಕಾನೂನು ಕಾಲೇಜಿನಲ್ಲಿ ಪಡೆದು ವಕೀಲಿ ವೃತ್ತಿಯನ್ನು ಮಂಡ್ಯದಲ್ಲಿಯೇ ಪ್ರಾರಂಭಿಸಿದರು.

ಸದಾ ಜನರ ಮಧ್ಯದಲ್ಲೇ ಇರಬಯಸುವ ಶ್ರೀಯುತರ ಬಳಿ ಅಧಿಕಾರದ ದಲ್ಲಾಳಿಗಳಾಗಲೀ, ದೊಡ್ಡ ದೊಡ್ಡ ಕಂಟ್ರಾಕ್ಟರ್‍ಗಳಾಗಲಿ ಯಾವಾಗಲೂ ಸುತ್ತುವರಿದಿರುವುದಿಲ್ಲ ಒಬ್ಬ ಸಾಮಾನ್ಯ ಮನುಷ್ಯನಿಗೂ ಮಾತಾಡಲು ಅವಕಾಶಮಾಡಿಕೊಡುವ ಶ್ರೀಯುತರು ನಿಜವಾದ ಅರ್ಥದಲ್ಲಿ ಪ್ರಜಾಪ್ರಭುತ್ವವಾದಿಗಳು.

ಮೌನಸಾಧಕ

ಸುಮಾರು 30 ವರ್ಷಗಳ ಹಿಂದೆಯೇ ತನ್ನ ಹುಟ್ಟೂರು ಹನಕೆರೆಯಲ್ಲಿ ವಿವೇಕ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಿ ತನ್ನ ಗ್ರಾಮದ ಸುತ್ತಲಿನ ಮಕ್ಕಳಿಗೆ ಉತ್ತಮವಾದ ಶಿಕ್ಷಣವನ್ನು ಕೊಡಿಸಲು ಮುಂದಾದದ್ದು ಗ್ರಾಮೀಣ ಜನತೆಯ ಬಗ್ಗೆ ಅವರಿಗಿರುವ ತುಡಿತಕ್ಕೆ ಸಾಕ್ಷಿ.

ನೂರು ಜನ ಮಕ್ಕಳಿಗೆ ಉಚಿತವಾಗಿ ಹಾಸ್ಟೆಲ್‍ನ ಸೌಲಭ್ಯ

ಇಂದು ಆ ಸಂಸ್ಥೆಯಲ್ಲಿ ಪೂರ್ವ ಪ್ರಾಥಮಿಕದಿಂದ ಹಿಡಿದು ಹತ್ತನೇ ತರಗತಿಯವರೆಗೆ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಐಟಿಐ ಶಿಕ್ಷಣ ಸಂಸ್ಥೆಯೊಂದನ್ನು ಪ್ರಾರಂಭಿಸಿದ್ದಾರೆ. ನೂರು ಜನ ಮಕ್ಕಳಿಗೆ ಉಚಿತವಾಗಿ ಹಾಸ್ಟೆಲ್‍ನ ಸೌಲಭ್ಯವನ್ನು ಒದಗಿಸಿದ್ದಾರೆ.

ಶ್ರೀ ಎಂ . ಶ್ರೀನಿವಾಸ್

ಸದ್ದುಗದ್ದಲವಿಲ್ಲದೆ ಸರ್ಕಾರದ ಕಾರ್ಯಗಳನ್ನು ಅನುಷ್ಠಾನಗೊಳಿಸುತ್ತಲೇ ಸಾಗಿರುವ ಶ್ರೀಯುತರು ನಿಗರ್ವಿಗಳು.

History

  • user-image
  • ಪ್ರಸಿದ್ಧ ವಕೀಲರಾಗಿದ್ದ ಶ್ರೀಯುತ ಹನುಮೇಗೌಡರ ಬಳಿಯಲ್ಲಿ ಕಿರಿಯ ವಕೀಲರಾಗಿ ವಕೀಲಿ ವೃತ್ತಿಯಲ್ಲಿ ಪ್ರಾವೀಣ್ಯತೆಯನ್ನು ಪಡೆದ ಶ್ರೀಯುತರು ಜೊತೆಜೊತೆಗೆ ಸಮಾಜಿಮುಖಿ ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಂಡರು.
  • user-image
  • ಓದುತ್ತಿದ್ದಾಗಲೇ ಅಂದಿನ ಮಹಾನಾಯಕರಾಗಿದ್ದ ದಿವಂಗತ ಕೆ.ವಿ. ಶಂಕರಗೌಡರ ರಚನಾತ್ಮಕ ಚಟುವಟಿಕೆಗಳಿಂದ ಪ್ರಭಾವಿತರಾಗಿದ್ದ ಶ್ರೀಯುತರು ಮುಂದೆ ಶಂಕರಗೌಡರಂತೆ ಜನಮುಖಿ ಕೆಲಸಗಳನ್ನು ಮಾಡಬೇಕೆಂಬ ಆದರ್ಶವನ್ನಿಟ್ಟು ಮುನ್ನಡೆದರು.
  • user-image
  • ತನ್ನ ಜಿಲ್ಲೆಯ ಹಲವಾರು ಮಂದಿ ಯುವಕರಿಗೆ ಆ ಸಂಸ್ಥೆಯಲ್ಲಿ ಕೆಲಸ ಕೊಡಿಸಿ ಜೀವನ ನಿರ್ವಹಣೆಗೆ ಅವಕಾಶಮಾಡಿಕೊಡುತ್ತಾರೆ. ಅಲ್ಲೆಲ್ಲಿಯೂ ಅವರಿಗೆ ಕಪ್ಪುಚುಕ್ಕೆ ಅಂಟಿಕೊಳ್ಳದಿರುವುದು ನಿಜಕ್ಕೂ ಶ್ಲಾಘನೀಯ ವಿಚಾರವೇ.

History

  • user-image
  • ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕೋಶಾಧ್ಯಕ್ಷರಾಗಿಯೂ ಕೆಲಸ ಮಾಡಿರುವ ಶ್ರೀಯುತರು ಜಿಲ್ಲಾ ಸಾಹಿತ್ಯ ಸಮ್ಮೇಳನವನ್ನು ಸಂಘಟಿಸಿ ರಾಜ್ಯಮಟ್ಟದ ಸಮ್ಮೇಳನದಂತೆ ಯಶಸ್ವಿಯಾಗಿ ನಡೆಸಿಕೊಟ್ಟಿದ್ದಾರೆ.
  • user-image
  • ಈ ಜಿಲ್ಲೆಯ ಹಿರಿಯ ನಾಯಕರಾಗಿದ್ದ ದಿವಂಗತ ಕೆ.ವಿ. ಶಂಕರಗೌಡರ ಶತಮಾನೋತ್ಸವವನ್ನು 2014-15ರವರೆಗೆ ಆಚರಿಸಿ ಅವರ ನೆನಪಿನಲ್ಲಿ ಅಂದಾಜು ಎರಡೂವರೆ ಕೋಟಿ ವೆಚ್ಚದಲ್ಲಿ ಶಂಕರಗೌಡ ಶತಮಾನೋತ್ಸವ ಭವನ ನಿರ್ಮಾಣಗೊಳ್ಳಲು ಶ್ರಮವಹಿಸಿದ್ದಾರೆ

ಶಾಸಕರ ಕಚೇರಿ ನಕ್ಷೆ ಮಂಡ್ಯ

  • ಶ್ರೀ ಎಂ . ಶ್ರೀನಿವಾಸ್
  • ಮೊ: 9448276570
  • ಮಾನ್ಯ ಶಾಸಕರು ,ಮಂಡ್ಯ ವಿಧಾನಸಭಾ ಕ್ಷೇತ್ರ.
  • ಪ್ರದೀಪ್ ಕಿರಣ್.ಪಿ
  • ಮೊ: 9164907565
  • ಶಾಸಕರ ಆಪ್ತ ಸಹಾಯಕರು
  • Email: pradeepasaamaveda@gmail.com
  • ರಾಜ್ಯ ಸರ್ಕಾರದ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ.